ನಮ್ಮ ಪ್ರಮುಖ ಕಾರ್ಯಕ್ರಮಗಳು
ಸಮುದಾಯದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗಾಗಿ ನಾವು ರೂಪಿಸಿರುವ ಕಾರ್ಯಸೂಚಿಗಳು
ಶಿಕ್ಷಣ ಮತ್ತು ತರಬೇತಿ
ಬಡ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಶೈಕ್ಷಣಿಕ ಬೆಂಬಲ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದು.
ಕೌಶಲ್ಯಾಭಿವೃದ್ಧಿ
ಯುವಜನರಲ್ಲಿ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಲು ವಿಶೇಷ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸುವುದು.
ಉದ್ಯೋಗ ಮತ್ತು ವೃತ್ತಿ ಅಭಿವೃದ್ಧಿ
ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಮಾರ್ಗದರ್ಶನ ಮತ್ತು ನೌಕರರಲ್ಲಿ ವೃತ್ತಿಪರ ಪ್ರಗತಿಗೆ ಸೂಕ್ತ ಸಹಕಾರ ಒದಗಿಸುವುದು.
ಆರೋಗ್ಯ ಮತ್ತು ಕಲ್ಯಾಣ
ನೌಕರರು ಮತ್ತು ಸಮುದಾಯದ ಬಾಂಧವರ ಆರೋಗ್ಯ ಸುರಕ್ಷತೆಗಾಗಿ ವೈದ್ಯಕೀಯ ಜಾಗೃತಿ ಮತ್ತು ಕಲ್ಯಾಣ ಕಾರ್ಯಕ್ರಮಗಳು.
ಆರ್ಥಿಕ ಸಬಲೀಕರಣ
ಬಡ ಕುಟುಂಬಗಳ ಹಾಗೂ ಸಂಕಷ್ಟದಲ್ಲಿರುವ ನೌಕರರ ಆರ್ಥಿಕ ಸ್ಥಿರತೆಗೆ ಪರಸ್ಪರ ಸಹಕಾರ ನೀಡುವ ಯೋಜನೆಗಳು.
ಸಮಾಜಸೇವೆ
ಹಿಂದುಳಿದ ಮತ್ತು ನೊಂದ ವರ್ಗದವರಿಗೆ ನೆರವಾಗಲು ಸಮಾಜಸೇವಾ ಮತ್ತು ಕಲ್ಯಾಣ ಚಟುವಟಿಕೆಗಳನ್ನು ಜಾರಿಗೆ ತರುವುದು.
ಸಮುದಾಯ ಏಕತೆ
ಸಮುದಾಯದ ಬಂಧುಗಳಲ್ಲಿ ಸೌಹಾರ್ದತೆ, ಪರಸ್ಪರ ಗೌರವ ಹಾಗೂ ಸಂಘಟಿತ ಬಲವನ್ನು ವೃದ್ಧಿಸುವ ಸಮಾವೇಶಗಳು.
ಸುದ್ದಿ ಮತ್ತು ಪ್ರಕಟಣೆಗಳು
🔔 ಹೊಸ ಸುದ್ದಿಗಳು ಮತ್ತು ಕಾರ್ಯಕ್ರಮಗಳ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.